ಸೆ.15ರಿಂದ ‘ತುಳು ಭಾಷಾ ಕಲಿಕಾ ತರಗತಿ’ ಆರಂಭ
ಮಂಗಳೂರು, ಆ.31: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ತುಳುವೇತರರಿಗೆ ತುಳು ಕಲಿಸುವ ಯೋಜನೆಯಡಿಯಲ್ಲಿ ತುಳು ಭಾಷೆಯಲ್ಲಿ ಸಂಭಾಷಣೆ ನಡೆಸಲು ತರಬೇತಿ ಶಿಬಿರವನ್ನು ಆಯೋಜಿಸಿದ್ದು, ಸೆ.15ರಂದು ತುಳುಭವನದ ಸಿರಿಚಾವಡಿಯಲ್ಲಿ ಉದ್ಗಾಟನೆಗೊಳ್ಳಲಿದೆ.
ಹೊರ ಜಿಲ್ಲೆಗಳಿಂದ ತುಳುನಾಡಿಗೆ ಉದ್ಯೋಗ ನಿಮಿತ್ತ ಬಂದಿರುವ ಆನೇಕರು ತುಳು ಭಾಷೆ ಕಲಿಯಲು ಉತ್ಸಾಹ ತೋರಿದ್ದು, ಅವರಿಗೆ ತುಳು ಕಲಿಸುವ ಬಗ್ಗೆ ಸೆ.15ರಿಂದ 1 ತಿಂಗಳು ಪ್ರತಿ ದಿನ ಒಂದು ಗಂಟೆ ತರಗತಿ ನಡೆಸಲು ಉದ್ದೇಶಿಸಲಾಗಿದೆ. ಸೆ.4ರಂದು ತುಳು ಲಿಪಿ ಕಲಿಸುವ ತರಬೇತಿ ಶಿಬಿರ ಉದ್ಘಾಟನೆ ನಡೆಯಲ್ಲಿದೆ.
ತುಳು ಲಿಪಿ ಕಲಿಕಾ ತರಗತಿಯು ಒಂದು ತಿಂಗಳು ಪ್ರತಿ ರವಿವಾರ ಇಡೀ ದಿನ ಜರುಗಲಿದೆ. ಆಸಕ್ತರು ಅಕಾಡಮಿಯ ಕಚೇರಿಯನ್ನು ಮೊ.ಸಂ: 9901016962ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story