ಸೆ.1: ಹಜ್ ಯಾತ್ರಿಕರ ಪ್ರಪ್ರಥಮ ತಂಡ ಮಂಗಳೂರಿಗೆ ಆಗಮನ
ಮಂಗಳೂರು, ಆ. 31: ಕರ್ನಾಟಕದಿಂದ ಹಜ್ ಯಾತ್ರೆಗೈದ ಪ್ರಪ್ರಥಮ ತಂಡವು ಸೆ.1ರ ರಾತ್ರಿ ಸುಮಾರು 11 ಗಂಟೆಗೆ ಮಂಗಳೂರಿಗೆ ಆಗಮಿಸಲಿದೆ.
ಜುಲೈ 21ರಂದು ಮಂಗಳೂರಿನಿಂದ ಹಜ್ ಯಾತ್ರೆ ಕೈಗೊಂಡಿದ್ದ ಸುಮಾರು 144 ಮಂದಿಯನ್ನು ಒಳಗೊಂಡ ಈ ತಂಡವು 41 ದಿನಗಳ ಹಜ್ ಕ್ರಿಯೆಗಳನ್ನು ಮುಗಿಸಿ ಮರಳಲಿದೆ.
ಜುಲೈ 22 ಮತ್ತು 23ರಂದು ತೆರಳಿದ್ದ 2ನೆ ಮತ್ತು 3ನೆ ತಂಡವು ಕ್ರಮವಾಗಿ ಸೆ.2 ಮತ್ತು 3ರಂದು ಮರಳಲಿದೆ ಎಂದು ರಾಜ್ಯ ಹಜ್ ಕಮಿಟಿಯ ಸದಸ್ಯ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ತಿಳಿಸಿದ್ದಾರೆ.
Next Story