ಸಾಲಿಗ್ರಾಮ: ಒಂದು ಮತ ಅಂತರದಿಂದ ಗೆದ್ದ ಕಾಂಗ್ರೆಸ್ ಅಭ್ಯರ್ಥಿ !
ಉಡುಪಿ, ಸೆ.3: ಸಾಲಿಗ್ರಾಮ ಪಟ್ಟಣ ಪಂಚಾಯತ್ನ ತೋಡುಕಟ್ಟು ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಪುನೀತ್ ಪೂಜಾರಿ ತನ್ನ ಪ್ರತಿಸ್ಪರ್ಧಿ ಬಿಜೆಪಿ ಯ ಕರುಣಾಕರ ವಿರುದ್ಧ ಕೇವಲ ಒಂದು ಮತದ ಅಂತರದಿಂದ ರೋಚಕ ಗೆಲುವು ಸಾಧಿಸಿದ್ದಾರೆ.
ಪುನೀತ್ ಪೂಜಾರಿ 355 ಹಾಗೂ ಕರುಣಾಕರ 354 ಮತಗಳನ್ನು ಪಡೆದು ಕೊಂಡಿದ್ದಾರೆ. ಪುನೀತ್ ಅವರಿಗೆ ಲಭಿಸಿದ ಒಂದು ಅಂಚೆ ಮತ ಅವರ ಗೆಲುವಿನಲ್ಲಿ ನಿರ್ಣಾಯಕವಾಗಿ ಮೂಡಿಬಂತು.
ಪ್ರಥಮ ಬಾರಿಗೆ ಚುನಾವಣೆ ಸ್ಪರ್ಧಿಸಿರುವ ಪುನೀತ್ ಜಯಭೇರಿ ಬಾರಿಸಿ ದ್ದಾರೆ. ಇಲ್ಲಿ ಅವರ ವಿರುದ್ಧ ಒಂದು ಮತದ ಅಂತರದಿಂದ ಸೋಲುಂಡ ಕರುಣಾಕರ ಬಿಜೆಪಿಯಿಂದ 4 ಬಾರಿ ಗೆಲುವು ಸಾಧಿಸಿ, ಒಂದು ಅವಧಿಯಲ್ಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾಗಿದ್ದರು.
Next Story