ಟಾಟಾ ಸುಮೋ ಢಿಕ್ಕಿ: ಬೈಕ್ ಸವಾರ ಮೃತ್ಯು
ಉಡುಪಿ, ಸೆ.5: ಟಾಟಾ ಸುಮೋ ವಾಹನವೊಂದು ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಸಹಸವಾರ ಮೃತಪಟ್ಟ ಘಟನೆ ಸೆ. 4ರಂದು ಮಧ್ಯಾಹ್ನ 3:30ರ ಸುಮಾರಿಗೆ ಕೊಡಂಕೂರು ನಿಟ್ಟೂರಿನ ಬಳಿ ಬಾಳಿಗಾ ಫಿಶ್ನೆಟ್ ಎದುರು ನಡೆದಿದೆ.
ಮೃತರನ್ನು ಕೊಡಂಕೂರು ನ್ಯೂ ಕಾಲೋನಿಯ ರಜಿತ್ ಕುಮಾರ್ ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಬೈಕ್ ಸವಾರ ಕೊಡಂಕೂರಿನ ಸತೀಶ್(34) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂಬಾಗಿಲು ಕಡೆಯಿಂದ ಬಂದು ರಸ್ತೆಯನ್ನು ದಾಟಲು ನಿಲ್ಲಿಸಿಕೊಂಡಿದ್ದ ಇವರ ಬೈಕಿಗೆ ಉಡುಪಿ ಕರಾವಳಿ ಕಡೆಯಿಂದ ಸಂತೆಕಟ್ಟೆ ಕಡೆಗೆ ಹೋಗುತ್ತಿದ್ದ ಟಾಟಾ ಸುಮೋ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ರಂಜಿತ್ ಕುಮಾರ್, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story