ಕುಂದಾಪುರ ಪುರಸಭೆ: ಅರ್ಜಿಗಳ ಆಹ್ವಾನ
ಉಡುಪಿ, ಸೆ.10: ಕುಂದಾಪುರ ಪುರಸಭೆ 2017-18ನೇ ಸಾಲಿನ ವಿಶೇಷ ಅನುದಾನ ಹಾಗೂ 2018-19ನೇ ಸಾಲಿನ ಶೇ.24.10ರ ಪ.ಜಾತಿ/ಪ.ಪಂಗಡದವರ ಶ್ರೇಯೋಭಿವೃದ್ಧಿಗಾಗಿ 28 ಲಕ್ಷ ರೂ., ಶೇ 7.25ರ ಇತರೇ ಹಿಂದುಳಿದ ವರ್ಗದವರ ಶ್ರೇಯೋಭಿವೃಧ್ದಿಗಾಗಿ 5.15 ಲಕ್ಷ ರೂ. ಹಾಗೂ ಶೇ.3ರ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ 2.17 ಲಕ್ಷ ರೂ. ಮೊತ್ತವನ್ನು ಕ್ರಿಯಾಯೋಜನೆಯಲ್ಲಿ ಕಾದಿರಿಸಲಾಗಿದ್ದು, ಈ ಕುರಿತು ಸೂಕ್ತ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story