ಉಡುಪಿ ನಗರ ಸ್ಥಳೀಯ ಸಂಸ್ಥೆ: ಚುನಾವಣಾಧಿಕಾರಿಗಳ ನೇಮಕ
ಉಡುಪಿ, ಸೆ.14: ಜಿಲ್ಲೆಯಲ್ಲಿ ಇತ್ತೀಚೆಗೆ ಚುನಾವಣೆ ನಡೆದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.
ಉಡುಪಿ ನಗರಸಭೆಗೆ ಕುಂದಾಪುರ ಸಹಾಯಕ ಆಯುಕ್ತರು, ಸಾಲಿಗ್ರಾಮ ಪಟ್ಟಣಪಂಚಾಯತ್ಗೆ ಉಡುಪಿ ತಹಶೀಲ್ದಾರ್, ಕುಂದಾಪುರ ಪುರಸಭೆಗೆ ಕುಂದಾಪುರ ತಹಶೀಲ್ದಾರ್ ಹಾಗೂ ಕಾರ್ಕಳ ಪುರಸಭೆಗೆಕಾರ್ಕಳ ತಹಶೀಲ್ದಾರ್ ಚುನಾವಣಾಧಿಕಾರಿಗಳಾಗಿರುತ್ತಾರೆ.
ಆಯಾ ಚುನಾವಣಾಧಿಕಾರಿಗಳು ಕೂಡಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣಾ ದಿನಾಂಕ ಗೊತ್ತುಪಡಿಸಿ, ಸದಸ್ಯರಿಗೆ ಸಾಕಷ್ಟು ಕಾಲಾವಕಾಶ ನೀಡಿ, ನೋಟೀಸ್ ಜಾರಿ ಮಾಡಿ ನಿಯಮಾನುಸಾರ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಮೀಸಲಾತಿ ವಿವರ: ಉಡುಪಿ ನಗರಸಭೆ: ಅಧ್ಯಕ್ಷ ಸ್ಥಾನ-ಹಿಂದುಳಿದ ವರ್ಗ ಎ ಮಹಿಳೆ, ಉಪಾಧ್ಯಕ್ಷ-ಪರಿಶಿಷ್ಟ ಜಾತಿ, ಸಾಲಿಗ್ರಾಮ ಪಟ್ಟಣ ಪಂಚಾಯತ್: ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಗಳೆರಡೂ ಸಾಮಾನ್ಯ ಮಹಿಳೆ, ಕುಂದಾಪುರ ಪುರಸಭೆ:ಅಧ್ಯಕ್ಷ ಸ್ಥಾನ-ಹಿಂದುಳಿದ ವರ್ಗ ಬಿ ಮಹಿಳೆ, ಉಪಾಧ್ಯಕ್ಷ ಸ್ಥಾನ- ಪರಿಶಿಷ್ಟ ಜಾತಿ, ಕಾರ್ಕಳ ಪುರಸಭೆ: ಅಧ್ಯಕ್ಷ ಸ್ಥಾನ-ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನ-ಸಾಮಾನ್ಯ ಮಹಿಳೆ.