ಸೆ. 16: ಅಲ್-ಮದೀನಾ ಅಲುಮ್ನಿ ಸಮಾವೇಶ
ಮಂಜನಾಡಿ, ಸೆ. 14: ಅಲ್-ಮದೀನಾ ಮಂಜನಾಡಿ ಸಂಸ್ಥೆಯ ಹಳೆ ವಿಧ್ಯಾರ್ಥಿ ಸಂಘಟನೆಯಾದ ಅಲ್-ಮದೀನಾ ಅಲುಮ್ನಿ ಸಮಾವೇಶ ಸೆ. 16ರಂದು ಬೆಳಗ್ಗೆ 10ಕ್ಕೆ ಅಲ್-ಮದೀನಾ ಕ್ಯಾಂಪಸ್ಸಿನಲ್ಲಿ ನಡೆಯಲಿದೆ.
ಅಬ್ಬಾಸ್ ಉಸ್ತಾದ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಅಬ್ದುಲ್ ಅಝೀಝ್ ಅಹ್ಸನಿ ಕಣ್ಣೂರ್ ವಿಷೇಶ ಉಪನ್ಯಾಸ ನೀಡಲಿದ್ದಾರೆ.
ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಸಮಾವೇಶವನ್ನು ಉದ್ಘಾಟಿಸಲಿದ್ದು, ಅಲ್-ಮದೀನಾ ಅಲುಮ್ನಿ ಅಧ್ಯಕ್ಷ ಎಲ್.ಎಚ್ ಶರೀಫ್ ಸಅದಿ ಮೂಡಬಿದ್ರೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಪ್ರ.ಕಾರ್ಯದರ್ಶಿ ಇಕ್ಬಾಲ್ ಮರ್ಝೂಖಿ ಸಖಾಫಿ ಗೇರುಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story