ಸೆ.21ರಂದು ‘ಆಟಮ್ ಫಿಟ್ನೆಸ್ ಕ್ಲಬ್’ ಉದ್ಘಾಟನೆ
ಮಂಗಳೂರು, ಸೆ.19: ಅತ್ಯಂತ ಸುಸಜ್ಜಿತವಾದ ಮತ್ತು 60ಕ್ಕಿಂತ ಹೆಚ್ಚಿನ ಮಿಷಿನ್ಗಳನ್ನು ಹೊಂದಿರುವ ಜಿಮ್ ಕೇಂದ್ರ ‘ಆಟಮ್ ಫಿಟ್ನೆಸ್ ಕ್ಲಬ್’ ಸೆ.21ರಂದು ಪೂರ್ವಾಹ್ನ 9.30ಕ್ಕೆ ನಗರದ ಮಣ್ಣಗುಡ್ಡೆಯ ವಿಜಯ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಮ್ಯಾನೇಜಿಂಗ್ ಅಡ್ವೈಸರ್ ವಿಕಾಸ್ ಪುತ್ರನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜರ್ಮನಿ, ಯುಎಸ್ಎಯಿಂದ ಅಗತ್ಯ ಉಪಕರಣಗಳನ್ನು ತರಿಸಿಕೊಳ್ಳಲಾಗಿದೆ. ವಿಶಾಲವಾದ ಜಿಮ್ ಕೇಂದ್ರದಲ್ಲಿ ಈ ಉಪಕರಣಗಳನ್ನು ಜೋಡಿಸಲಾಗಿದ್ದು, ತರಬೇತಿ ಪಡೆದು ಸರ್ಟಿಫಿಕೆಟ್ ಹೊಂದಿದ ತರಬೇತುದಾರರಿಂದ ಜಿಮ್ಗೆ ಬರುವ ಮಂದಿಗೆ ಮಾಹಿತಿ ಒದಗಿಸಲಾಗುವುದು. ಅಲ್ಲದೆ ಅಗತ್ಯ ತಿನಿಸುಗಳ ವ್ಯವಸ್ಥೆಯೂ ಕೇಂದ್ರ ಹೊಂದಿರಲಿದೆ ಎಂದವರು ತಿಳಿಸಿದರು.
ಜುಂಬಾ, ಯೋಗ, ಕಾರ್ಡಿಯೋ, ವೈಟ್ ಟ್ರೈನಿಂಗ್, ಸರ್ಕ್ಯೂಟ್ ಟ್ರೈನಿಂಗ್, ಥೆರಪಿ ಇತ್ಯಾದಿ ಸೌಲಭ್ಯಗಳು ಈ ಕೇಂದ್ರದಲ್ಲಿ ದೊರೆಯಲಿವೆ ಎಂದು ಸಂಸ್ಥೆಯ ಸಿಇಒ ಮೋಹಿತ್ ಮಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾಜ ಪ್ರವೀಣ್ ಆಳ್ವ, ಪ್ರದೀಪ್ ಆಳ್ವ, ಸಾಹಿಲ್ ರೈ ಉಪಸ್ಥಿತರಿದ್ದರು.