ಸೆ.21ರಂದು ಉಳ್ಳಾಲದಲ್ಲಿ ‘ಇಸ್ಲಾಮಿಕ್ ಸೆಂಟರ್’ ಉದ್ಘಾಟನೆ
ಉಳ್ಳಾಲ, ಸೆ.20: ದಾರುಲ್ ಇಲ್ಮ್ ಮದ್ರಸದ ವತಿಯಿಂದ ಉಳ್ಳಾಲದ ನಿಮ್ರಾ ಮಸೀದಿಯ ಬಳಿ ನಿರ್ಮಿಸಲಾಗಿರುವ ಇಸ್ಲಾಮಿಕ್ ಸೆಂಟರ್ ಸೆ.21ರಂದು ಸಂಜೆ 4:15ಕ್ಕೆ ಉದ್ಘಾಟನೆಗೊಳ್ಳಲಿದೆ.
ನಿಮ್ರಾ ಮಸೀದಿಯ ಖತೀಬ್ ರಫೀಉದ್ದೀನ್ ಕುದ್ರೋಳಿ ನೇತೃತ್ವದಲ್ಲಿ ಈ ಸೆಂಟರ್ ಉದ್ಘಾಟನೆಗೊಳ್ಳಲಿದೆ. ಇದೇ ಸಂದರ್ಭ ದಾರುಲ್ ಇಲ್ಮ್ ಮದ್ರಸವು ಸಮಗ್ರ ವ್ಯವಸ್ಥೆಯೊಂದಿಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ.
ಇಲ್ಲಿ ಮಕ್ಕಳಿಗೆ ಇಸ್ಲಾಮಿಕ್ ಶಿಕ್ಷಣದ ಜೊತೆ ಅವರ ಸಂಪೂರ್ಣ ಮತ್ತು ಸಮಗ್ರ ಬದಲಾವಣೆಯ ಕೇಂದ್ರವನ್ನು ಸ್ಥಾಪಿತಗೊಳ್ಳಲಿದೆ. ಮಹಿಳೆಯರಿಗೆ ಮದ್ರಸ ಶಿಕ್ಷಣ, ಪುರುಷರಿಗೆ ದೈನಂದಿನ ತರಗತಿ, ಸಾಪ್ತಾಹಿಕ ಕಾರ್ಯಕ್ರಮಗಳು, ಸಮುದಾಯಕ್ಕೆ ವಿವಿಧ ವಿಚಾರಗಳ ಮಾಹಿತಿ ಕೇಂದ್ರ, ಇಸ್ಲಾಮಿಕ್ ಲೈಬ್ರೆರಿ ಹಾಗೂ ಮುಸ್ಲಿಮರ ಅಭಿವೃದ್ಧಿಯ ಸಮಗ್ರ ಯೋಜನೆಯೊಂದಿಗೆ ವ್ಯವಸ್ಥೆಗಳು ಆರಂಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story