ವೆನ್ಲಾಕ್ ದ್ವಿತೀಯ ದರ್ಜೆ ಸಹಾಯಕ ಶೇಷಪ್ಪರಿಗೆ ಸನ್ಮಾನ
ಮಂಗಳೂರು, ಸೆ.24: ನಗರದಲ್ಲಿ ರವಿವಾರ ನಡೆದ ದಿ ಸೌತ್ ಕೆನರಾ ಗವರ್ನ್ಮೆಂಟ್ ಆಫೀಸರ್ಸ್, ಕೋ-ಅಪರೇಟಿವ್ ಬ್ಯಾಂಕ್ ಲಿ.ನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರಿ ನೌಕರರ ಜಿಲ್ಲಾ ಸಂಘದ ಉಪಾಧ್ಯಕ್ಷ ಹಾಗೂ ವೆನ್ಲಾಕ್ ಜಿಲ್ಲಾಸ್ಪತ್ರೆಯ ದ್ವಿತೀಯ ದರ್ಜೆ ಸಹಾಯಕ ಬಿ.ಶೇಷಪ್ಪ ಅವರನ್ನು ಸನ್ಮಾನಿಸಲಾಯಿತು.
ಸರಕಾರಿ ಆಸ್ಪತ್ರೆಗೆ ಬರುವ ಬಡ ಮತ್ತು ಅನಕ್ಷರಸ್ಥ ರೋಗಿಗಳಿಗೆ ಕೈಲಾದ ಆರ್ಥಿಕ ಸಹಾಯ ನೀಡುವ ಶೇಷಪ್ಪ ಸೇವೆಯ ಬಿಡುವಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. 2013-14ನೇ ಸಾಲಿನಲ್ಲಿ ಮಾನವ ಹಕ್ಕು ಒಕ್ಕೂಟ ಇಂಡಿಯಾದಿಂದ ಉತ್ತಮ ನಾಗರಿಕಾ ಸೇವಾ ಪ್ರಶಸ್ತಿ ಪುರಸ್ಕಾರ, 2017-18ನೇ ಸಾಲಿನಲ್ಲಿ ರಾಜ್ಯ ಸರಕಾರ ಜಿಲ್ಲಾ ಮಟ್ಟದ ಸರಕಾರಿ ಸೇವೆಗೆ ನೀಡುತ್ತಿರುವ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ.
Next Story