ತೋಡಾರು : ಯೆನೆಪೊಯ ಕಾಲೇಜಿನಲ್ಲಿ 'ಯೆನ್ ಮಿಲನ್-18' ಕಾರ್ಯಕ್ರಮ
ಮೂಡುಬಿದಿರೆ, ಅ. 14: ಇಲ್ಲಿನ ತೋಡಾರು ಯೆನೆಪೊಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ "ಯೆನ್ ಮಿಲನ್-18" ಕಾರ್ಯಕ್ರಮವು ಕಾಲೇಜಿನ ಆವರಣದಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ.ಡಿ'ಸೋಜಾ ಅಧ್ಯಕ್ಷತೆಯನ್ನು ವಹಿಸಿ ಕಾಲೇಜಿನ ಹಳೆ ವಿದ್ಯಾರ್ಥಿ, ಏವರಿ ಹೋಲ್ಡಿಂಗ್ಸ್ ಪ್ರೈ.ಲಿಮಿಟೆಡ್ನ ಸೀನಿಯರ್ ಸಾಫ್ಟ್ವೇರ್ ಡೆವೆಲಪರ್ ಪ್ರಜ್ವಲ್ ಐ.ಆರ್ ಅವರ ಸಾಧನೆಯನ್ನು ಗುರುತಿಸಿ "ಪ್ರಭಾವಿ ಹಳೆ ವಿದ್ಯಾರ್ಥಿ" ಎಂದು ಗೌರವಿಸಿ ಮಾತನಾಡಿ ಹಳೆ ವಿದ್ಯಾರ್ಥಿಗಳ ಸಾಧನೆ ನಮ್ಮ ಕಾಲೇಜಿನ ಹೆಮ್ಮೆ ಎಂದು ಹೇಳಿದರು.
ಎಲ್ಲಾ ವಿಭಾಗಗಳ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ನೆನಪುಗಳನ್ನು ಮೆಲುಕು ಹಾಕಿದರು. ಪ್ರೊ.ವಾಣಿ ಸ್ವಾಗತಿಸಿದರು. ಪ್ರೊ.ರಾಜಕಿರಣ್ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಶಶಾಂಕ್ ಎಂ.ಗೌಡ ವಂದಿಸಿದರು.
Next Story