ಕಳವು ಪ್ರಕರಣ: ಬೈಕ್ ಸಹಿತ ಆರೋಪಿ ಸೆರೆ
ಬಂಟ್ವಾಳ, ಅ. 16: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ವಾಹನ ಸಹಿತ ಆರೋಪಿಯೋರ್ವನನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಸಜಿಪನಡು ನಿವಾಸಿ ಅಝೀಝ್ (23) ಬಂಧಿತ ಆರೋಪಿ.
ಆ. 11ರಂದು ರಾತ್ರಿ ಗುಡ್ಡೆ ಅಂಗಡಿಯ ಶಾರದಾ ಸರ್ವೀಸ್ ಸ್ಟೇಷನ್ನ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನುಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಗ್ಗೆ ಬಿ.ಸಿ.ರೋಡಿನ ಭಂಡಾರಿಬೆಟ್ಟು ಎಂಬಲ್ಲಿ ವಾಹನ ತಪಾಸಣೆಯ ವೇಳೆ ಬೈಕ್ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story