ಕೊಯಿಲ ಸರಕಾರಿ ಪಶು ವೈದ್ಯಕೀಯ ಕಾಲೇಜು ಕಟ್ಟಡದ ನಿರ್ಮಾಣ ಸಾಮಗ್ರಿ ಕಳವು
ಕಡಬ, ನ.8: ಕೊಯಿಲ ಸರಕಾರಿ ಪಶು ವೈದ್ಯಕೀಯ ಕಾಲೇಜು ಕಟ್ಟಡದ ನಿರ್ಮಾಣಕ್ಕೆಂದು ದಾಸ್ತಾನು ಇರಿಸಲಾಗಿದ್ದ ಸೆಂಟ್ರಿಂಗ್ ಸಾಮಗ್ರಿಗಳನ್ನು ಕಳವಾಗಿರುವ ಬಗ್ಗೆ ಕಡಬ ಠಾಣೆಗೆ ದೂರು ನೀಡಲಾಗಿದೆ.
ಕೊಯಿಲ ಗ್ರಾಮದ ಕೊಯಿಲ ಪಶು ಸಂಗೋಪನಾ (ಕೆ.ಸಿ. ಫಾರಂ) ಇಲಾಖೆಯ ಜಮೀನಿನಲ್ಲಿ ರಾಜ್ಯ ಸರಕಾರದ ವತಿಯಿಂದ ನಿರ್ಮಾಣವಾಗಲಿರುವ ಪಶು ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿಯನ್ನು ಬೆಂಗಳೂರಿನ ಸ್ಟಾರ್ ಬಿಲ್ಡರ್ರ್ಸ್ ಸಂಸ್ಥೆ ಗುತ್ತಿಗೆಯ ಆಧಾರದಲ್ಲಿ 2 ವರ್ಷಗಳಿಂದ ನಿರ್ವಹಿಸುತ್ತಿದೆ. ಕಟ್ಟಡ ಕಾಮಗಾರಿಗಾಗಿ ದಾಸ್ತಾನು ಇರಿಸಿದ್ದ 500 ಕಬ್ಬಿಣದ ಜಾಕ್ ಪೈಪ್, 700 ಕಬ್ಬಿಣದ ಸೆಂಟ್ರಿಂಗ್ ಪ್ಲೇಟ್ ಗಳು ಸೇರಿದಂತೆ ಒಟ್ಟು 4 ಲಕ್ಷ ರೂ. ಮೌಲ್ಯದ ಸೆಂಟ್ರಿಂಗ್ ಸಾಮಗ್ರಿಗಳು ಕಳವು ಆಗಿರುವುದು ಮಂಗಳವಾರ ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಸ್ಥೆಯ ಗುತ್ತಿಗೆದಾರ ಮುಹಮ್ಮದ್ ಅಶ್ರಫ್ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story