ಯಾಕೂಬ್ ಹರೇಕಳ ನಿಧನ
ಕೊಣಾಜೆ, ನ. 11: ಹರೇಕಳ ಗ್ರಾಮ ಡಿವೈಎಫ್ಐ ಮಾಜಿ ಮುಖಂಡ ಯಾಕೂಬ್ (46) ಅವರು ಹೃದಯಾಘಾತದಿಂದ ಶನಿವಾರ ಮಂಗಳೂರಿನಲ್ಲಿ ಕೆಲಸದಲ್ಲಿದ್ದ ಸಂದರ್ಭ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಡಿವೈಎಫ್ಐ ನ್ಯೂಪಡ್ಪು ಘಟಕದ ಅಧ್ಯಕ್ಷರಾಗಿದ್ದ ಸಂದರ್ಭ ನಿವೇಶನ ರಹಿತರ ಪರ, ನೀರು, ರಸ್ತೆ ಸಹಿತ ಮೂಲ ಸೌಕರ್ಯಕ್ಕಾಗಿ ನಡೆದ ಹೋರಾಟದ ನೇತೃತ್ವ ವಹಿಸಿದ್ದರು. ಮಂಗಳೂರಿನಲ್ಲಿ ಬಂದರು ಹಮಾಲಿ ಕಾರ್ಮಿಕರ ಪರವಾಗಿ ಹೋರಾಟದ ಮುಂಚೂಣಿಯಲ್ಲಿದ್ದ ಅವರು ರಸ್ತೆಬದಿ ವ್ಯಾಪಾರ ನಿರತರಾಗಿದ್ದ ಸಂದರ್ಭ ಹೃದಯಾಘಾತ ಸಂಭವಿಸಿತ್ತು. ಅವರ ನಿಧನಕ್ಕೆ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಸಂತೋಷ್ ಬಜಾಲ್, ರಫೀಕ್ ಹರೇಕಳ, ಹನೀಫ್ ಹರೇಕಳ, ಅಶ್ರಫ್ ಹರೇಕಳ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story