ಸಿಂಗಾಪುರದ ‘ಕಲಾ ಉತ್ಸವಂ’ಗೆ ಯಕ್ಷಗಾನ
ಉಡುಪಿ, ನ.13: ಉಡುಪಿ ಯಕ್ಷಗಾನ ಕೇಂದ್ರ ಹಾಗೂ ಯಕ್ಷರಂಗದ ಪರಿಣಿತ ಯಕ್ಷಗಾಲ ಕಲಾವಿದರನ್ನೊಳಗೊಂಡ ಯಕ್ಷಗಾನ ತಂಡವೊಂದು ಸಿಂಗಾಪುರದಲ್ಲಿ ನಡೆಯುವ ‘ಕಲಾ ಉತ್ಸವಂ’ನಲ್ಲಿ ಪಾಲ್ಗೊಳ್ಳಲಿದೆ.
ಈ ಕಲಾ ಉತ್ಸವವು ನ.17 ಮತ್ತು 18ರಂದು ಸಿಂಗಾಪುರದ ಎಸ್ಟ್ಲೆ ನಾಡೆ ರಂಗಮಂದಿರದಲ್ಲಿ ನಡೆಯಲಿದೆ. ಸ್ಥಳೀಯ ತಂಡ ಇದರಲ್ಲಿ ಭಾಗವಹಿಸಲು ಸಿಂಗಾಪುರಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಉಡುಪಿ ಯಕ್ಷಗಾನ ಕೇಂದ್ರದ ಪ್ರಕಟಣೆ ತಿಳಿಸಿದೆ.
Next Story