ಸಾಲಿಗ್ರಾಮ: ಮತದಾರರ ನೋಂದಣಿ ಅಭಿಯಾನ
ಉಡುಪಿ, ನ.13:2019ರ ಜನವರಿ 1ನೇ ತಾರೀಕಿಗೆ 18 ವರ್ಷ ಪೂರ್ಣ ಗೊಳ್ಳುವ ಯುವಕ- ಯುವತಿಯರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ನೊಂದಣಿ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದ್ದು, ಇದನ್ನು ನ.20ರವರೆಗೆ ವಿಸ್ತರಿಸಲಾಗಿದೆ.
ಆದ್ದರಿಂದ ಮತದಾರರು ತಮ್ಮ ಕುಟುಂಬದ ಯುವಕ, ಯುವತಿಯರನ್ನು ಮತದಾರ ಪಟ್ಟಿಗೆ ಸೇರಿಸಲು, ತಮ್ಮ ವಾಸಸ್ಥಾನದ ಬಳಿ ಇರುವ ಬಿಎಲ್ಒ (ಮತಗಟ್ಟೆ ಅಧಿಕಾರಿ) ಅಥವಾ ತಾಲೂಕು ಕಚೇರಿಗಳಲ್ಲಿ ಅರ್ಜಿ ನಮೂನೆ 6ರಲ್ಲಿ ಸಲ್ಲಿಸಿ, ಮತದಾನ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story