ನ.16ರಂದು ತುಳು ಚಿತ್ರ ‘ಕರ್ಣೆ’ ತೆರೆಗೆ
ಮಂಗಳೂರು, ನ.14: ಶ್ರೀ ರಕ್ಷಾ ಪ್ರೊಡಕ್ಷನ್ ಬ್ಯಾನರ್ನಡಿ ನಿರ್ಮಾಣವಾದ ತುಳು ಚಿತ್ರರಂಗದ 100ನೇ ಚಿತ್ರ ‘ಕರ್ಣೆ’ ನ.16ರಂದು ಕರಾವಳಿಯ 14 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ರಕ್ಷಿತ್ ಎಸ್. ಕೋಟ್ಯಾನ್ ಹೇಳಿದರು.
ಚಿತ್ರ ಎಲ್ಲ ವರ್ಗದವರು ಮೆಚ್ಚುವ ಕಥಾ ಹಂದರ ಹೊಂದಿದೆ. ನಾಯಕನ ನಟನಾಗಿ ಅರ್ಜುನ್ ಕಾಪಿಕಾಡ್ ಮತ್ತು ನಾಯಕಿಯಾಗಿ ಚಿತ್ರಶ್ರೀ ಅಂಚನ್ ನಟಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ನಿರ್ದೇಶಕ ಸಾಕ್ಷತ್ ಮಲ್ಪೆ ಮಾತನಾಡಿ, ಚಿತ್ರವು ಅನುಭವಿಗಳಿಂದ ತಾಂತ್ರಿಕವಾಗಿ ಚೆನ್ನಾಗಿ ಮೂಡಿಬಂದಿದೆ. ಆರೂರು ಸುಧಾಕರ್ ಶೆಟ್ಟಿ ಛಾಯಾಗ್ರಹಣ, ವೆಂಕಿ ಯು.ಡಿ.ವಿ. ಸಂಕಲನ, ರಘು ಧನ್ವಂತರಿ ಸಂಗೀತ, ಕಂಬಿ ರಾಜು ಅವರ ನೃತ್ಯ ನಿರ್ದೇಶನ, ಮಾಸ್ ಮಾದ ಅವರ ಸಾಹಸ ಮತ್ತು ವಿಜಯಕುಮಾರ್ ಕೊಡಿಯಾಲ್ಬೈಲ್ ಅವರ ಹಿನ್ನೆಲೆ ಧ್ವನಿ ಈ ಚಿತ್ರಕ್ಕಿದೆ ಎಂದರು.
ನಾಯಕ ನಟ ಅರ್ಜುನ್ ಕಾಪಿಕಾಡ್, ನಾಯಕಿ ಚಿತ್ರಶ್ರೀ ಅಂಚನ್, ಸಹನಿರ್ಮಾಪಕ ಶಿರಿಶ್ ಶೆಟ್ಟಿ ಉಪಸ್ಥಿತರಿದ್ದರು.
Next Story