ಕೃತಿಗೆ ‘ಮಿಸ್ ಇಂಡಿಯಾ ಫ್ರಾನ್ಸ್’ ರನ್ನರ್ ಅಪ್ ಕಿರೀಟ
ಉಡುಪಿ, ನ.16: ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್ ನಗರದಲ್ಲಿ ಇತ್ತೀಚೆಗೆ ಜರಗಿದ ಮಿಸ್ ಇಂಡಿಯಾ ಫ್ರಾನ್ಸ್-2018 ಸ್ಫರ್ಧೆಯಲ್ಲಿ ಉಡುಪಿಯ ಕೃತಿ ವಿ.ನಾಯಕ್ ಪ್ರಥಮ ರನ್ನರ್ ಅಪ್ ಕಿರೀಟ ಗೌರವಕ್ಕೆ ಪಾತ್ರ ರಾಗಿದ್ದಾರೆ.
ಇವರು ಉಡುಪಿ ಜಿಪಂ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯಾನಂದ ನಾಯಕ್ ಮತ್ತು ವಿಭಾ ವಿ.ನಾಯಕ್ ದಂಪತಿ ಪುತ್ರಿ. ಸುರತ್ಕಲ್ ಎನ್ಐಟಿಕೆ ಯಲ್ಲಿ ಮೆಟಲರ್ಜಿ ವಿಭಾಗದಲ್ಲಿ ಬಿ.ಟೆಕ್ ಪದವೀಧರರಾಗಿರುವ ಇವರು, ಪ್ರಸ್ತುತ ಪ್ಯಾರಿಸ್ನಲ್ಲಿ ಇಎಸ್ಎಸ್ಇಸಿ ಬಿಜಿನೆಸ್ ಸ್ಕೂಲ್ನಲ್ಲಿ ಮ್ಯಾನೇಜ್ ಮೆಂಟ್ನಲ್ಲಿ ಮಾಸ್ಟರ್ಸ್ ಪದವಿಯನ್ನು ಗಳಿಸಿದ್ದಾರೆ.
Next Story