ಬೊಳ್ಳೂರು: 11ನೇ ವಾರ್ಷಿಕ ಸ್ವಲಾತ್ ಮಜ್ಲಿಸ್, ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ
ಮಂಗಳೂರು, ನ. 18: ಮುಹಿಯುದ್ದೀನ್ ಜುಮಾ ಮಸೀದಿ ಬೊಳ್ಳೂರು ಹಳೆಯಂಗಡಿ ಇದರ ವತಿಯಿಂದ 11ನೇ ವಾರ್ಷಿಕ ಸ್ವಲಾತ್ ಮಜ್ಲಿಸ್, ಧಾರ್ಮಿಕ ಮತ ಪ್ರವಚನ ಕಾರ್ಯಕ್ರವು ನ. 18ರಂದು ರಾತ್ರಿ 7:30ಕ್ಕೆ ಮಸೀದಿ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಳ್ಳೂರು ಜುಮಾ ಮಸೀದಿ ಅಧ್ಯಕ್ಷ ಹಾಜಿ ಬಿ.ಎ.ಇದ್ದಿನಬ್ಬ ತೋಡಾರ್ ವಹಿಸಲಿದ್ದು, ಬೊಳ್ಳೂರು ಜುಮಾ ಮಸೀದಿಯ ಖತೀಬ್ ಶೈಖುನಾ ಬೊಳ್ಳೂರು ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸುವರು.
ಬೊಳ್ಳೂರು ಸದರ್ ಮುಹಲ್ಲಿಂ ಅಬ್ದುಲ್ ನಾಸರ್ ಮುಸ್ಲಿಯಾರ್ ಸ್ವಾಗತಿಸಲಿದ್ದಾರೆ. ಸ್ವಲಾತ್ ಮಜ್ಲಿಸ್ ಹಾಗೂ ದುಆಃ ನೇತೃತ್ವವನ್ನು ಶೈಖುನಾ ಅಸೈಯ್ಯಿದ್ ಇಬ್ರಾಹಿಂ ಬಾದಷಾ ತಂಙಳ್ ಅಲ್ ಅಝ್ಹರಿ ಅಲ್ ಬುಖಾರಿ ಆನೆಕಲ್ ವಹಿಸಲಿದ್ದು, ಮುಲ್ಕಿ ಜುಮಾ ಮಸೀದಿಯ ಖತೀಬ್ ಅಲ್ ಹಾಜ್ ಎಸ್.ಬಿ. ಮುಹಮ್ಮದ್ ದಾರಿಮಿ ಮುಖ್ಯ ಪ್ರಭಾಷಣ ಮಾಡುವರು ಎಂದು ಪ್ರಕಟನೆ ತಿಳಿಸಿದೆ.
Next Story