ನ.19ರಿಂದ ಅಮೆಮಾರ್ ನಲ್ಲಿ ಇಶ್ಕೇ ಮದೀನಾ ಮಿಲಾದ್ ಕಾರ್ಯಕ್ರಮ
ಮಂಗಳೂರು, ನ. 18: ಬದ್ರಿಯಾ ಜುಮಾ ಮಸೀದಿ ಹಾಗೂ ಬದ್ರಿಯಾ ಮದರಸ ಇದರ ವತಿಯಿಂದ ಪ್ರವಾದಿ (ಸ.ಅ) ರವರ ಜನ್ಮದಿನಾಚರಣೆಯ ಪ್ರಯುಕ್ತ ಇಶ್ಕೇ ಮದೀನಾ ಮಿಲಾದ್ ಕಾರ್ಯಕ್ರಮ, ಮದರಸ ಹಾಗೂ ದರ್ಸ್ ವಿದ್ಶಾರ್ಥಿಗಳ ಕಲಾ ಸಾಹಿತ್ಯ ಕಾರ್ಯಕ್ರಮವು ನ.19, 20ರಂದು ಮಸೀದಿಯ ಅಧ್ಯಕ್ಷ ಹಾಜಿ ಉಮರಬ್ಬ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸಭೆಯನ್ನು ಸ್ಥಳಿಯ ಖತೀಬ್ ಅಬೂಸ್ವಾಲಿಹ್ ಪೈಝಿ ಉದ್ಘಾಟಿಸಲ್ಲಿದ್ದಾರೆ.
ಸಭೆಯಲ್ಲಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಸದರ್ ಮುಅಲ್ಲಿಂ ಮುಹಿಯುದ್ದೀನ್ ಅಲ್ ಹಸನಿ, ಮಸೀದಿಯ ಕೋಶಾಧಿಕಾರಿ ಮುಸ್ತಫ ಅಮೆಮಾರ್ ಮುಂತಾದವರು ಭಾಗವಹಿಸಲ್ಲಿದಾರೆಂದು ಇಸ್ಮಾಯಿಲ್ ಯಮಾನಿ ತಿಂಗಳಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story