ನ.23: ಪಂಪ್ವೆಲ್ನ ತಖ್ವಾ ಜುಮಾ ಮಸೀದಿಯಲ್ಲಿ ಮೌಲೀದ್ ಪಾರಾಯಣ
ಮಂಗಳೂರು, ನ.19: ನಗರದ ಪಂಪ್ವೆಲ್ನಲ್ಲಿರುವ ತಖ್ವಾ ಜುಮಾ ಮಸೀದಿಯಲ್ಲಿ ನ.23ರಂದು ಮಗ್ರಿಬ್ ನಮಾಝ್ ಬಳಿಕ 6:30ಕ್ಕೆ ಮೌಲೀದ್ ಪಾರಾಯಣ ಕಾರ್ಯಕ್ರಮ ನಡೆಯಲಿದೆ.
ಶೈಖುನಾ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್, ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ತಖ್ವಾ ಜುಮಾ ಮಸೀದಿಯ ಖತೀಬ್ ಅಬ್ದುಲ್ ರಹಿಮಾನ್ ಸಖಾಫಿ, ಮಸೀದಿಯ ಅಧ್ಯಕ್ಷ ವೈ.ಅಬ್ದುಲ್ಲಾ ಕುಂಞಿ, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಇತರ ಸದಸ್ಯರು, ಸಾದಾತ್ಗಳು, ಉಲಮಾಗಳು-ಉಮರಾಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಮಸೀದಿಯ ಕೋಶಾಧಿಕಾರಿ ಹಾಗೂ ಮುತವಲ್ಲಿ ಎಸ್.ಎಂ.ರಶೀದ್ ಹಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story