ಕೋಟ: ಸಂಭ್ರಮದ ಮೀಲಾದ್ ಜಾಥಾ
ಕುಂದಾಪುರ, ನ.20: ಕೋಟ ಪಡುಕರೆಯ ಹಿದಾಯತುಲ್ ಇಸ್ಲಾಂ ಮದ್ರಸ ಹಾಗೂ ರಿಫಾಯಿ ಮಸ್ಜಿದ್ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ ಅ)ರ ಜನ್ಮದಿನಾಚರಣೆಯ ಪ್ರಯುಕ್ತ ಮಂಗಳವಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕೋಟ ಪಡುಕರೆಯಿಂದ ಕೋಡಿ ಕನ್ಯಾಣದವರೆಗೆ ಸಾಗಿದ ಪ್ರವಾದಿ ಸಂದೇಶ ಜಾಥಾದಲ್ಲಿ ಸಂದೇಶ ಭಾಷಣ, ರಿಫಾಯಿ ದಫ್ ತಂಡದಿಂದ ದಫ್ ಕಾರ್ಯಕ್ರಮ ಹಾಗೂ ಮದ್ರಸ ಮಕ್ಕಳ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.
Next Story