ಉಕ್ಕುಡ ಅಬ್ಬಾಸ್ ಹಾಜಿ ನಿಧನ
ವಿಟ್ಲ, ನ. 20: ಸಮೀಪದ ಉಕ್ಕುಡ ಟಿ.ಎಚ್.ಎಂ.ಎ. ಸಂಸ್ಥೆಯ ಸ್ಥಾಪಕ, ಪ್ರಗತಿಪರ ಕೃಷಿಕ ಹಾಗೂ ಉಕ್ಕುಡ ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷರೂ ಆದ ಯು. ಅಬ್ಬಾಸ್ ಹಾಜಿ ಉಕ್ಕುಡ (92) ಅವರು ಅಲ್ಪಕಾಲದ ಅಸೌಖ್ಯದಿಂದ ಉಕ್ಕುಡದ ಸ್ವಗೃಹದಲ್ಲಿ ಮಂಗಳವಾರ ರಾತ್ರಿ 11 ಗಂಟೆಗೆ ನಿಧನರಾದರು.
ಉಕ್ಕುಡದಲ್ಲಿ ಟಿ.ಎಚ್.ಎಂ.ಎ. (ತಾಜುಲ್ ಹಿಂದ್ ಮುಹ್ಯುದ್ದೀನ್ ಚಿಸ್ತಿ ಅಜ್ಮೀರಿ) ಹೆಸರಲ್ಲಿ ಕಲ್ಲಿನ ಕೋರೆ, ಲಾರಿಗಳನ್ನು ಹೊಂದಿದ್ದ ಅಬ್ಬಾಸ್ ಹಾಜಿ ಅವರು ಉಕ್ಕುಡ ಬದ್ರಿಯಾ ಜುಮಾ ಮಸೀದಿ ಸ್ಥಾಪನೆಗೆ ಸ್ಥಳವನ್ನು ದಾನ ಮಾಡಿದ್ದರು. ಹಲವಾರು ವರ್ಷಗಳಿಂದ ಮಸೀದಿಯ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿರುವ ಅಬ್ಬಾಸ್ ಹಾಜಿ ವಿಟ್ಲ ಪರಿಸರದಲ್ಲಿ ಮಾತ್ರವಲ್ಲದೇ ಕಾಸರಗೋಡು, ಪುತ್ತೂರು ಗಡಿಭಾಗದಲ್ಲಿ ಜನಾನುರಾಗಿಯಾಗಿದ್ದರು.
ಕೃಷಿಕರಾಗಿಯೂ ಹೆಸರುವಾಸಿಯಾಗಿದ್ದರು. ಅವರು ಪತ್ನಿ ಹಾಗೂ ನಾಲ್ವರು ಪುತ್ರರು, ನಾಲ್ವರು ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story