ನ. 25ರಂದು ಪೊಲೀಸ್ ಹುದ್ದೆಗಾಗಿ ಲಿಖಿತ ಪರೀಕ್ಷೆ
ಉಡುಪಿ, ನ.21: ಜಿಲ್ಲಾ ಪೊಲೀಸ್ ಘಟಕಕ್ಕೆ ಸಂಬಂಧಿಸಿದ ನಾಗರೀಕ ಪೊಲೀಸ್ ಕಾನ್ಸ್ಸ್ಟೇಬಲ್ ಹುದ್ದೆಯ ನೇಮಕಾತಿಗೆ ನ.25ರಂದು ಬೆಳಗ್ಗೆ 10:30ರಿಂದ 12ಗಂಟೆವರೆಗೆ ಎರಡು ಕೇಂದ್ರಗಳಲ್ಲಿ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ.
ಉಡುಪಿ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು(ಎಂಜಿಎಂ) ಹಾಗೂ ಉಡುಪಿ ಪೂರ್ಣಪ್ರಜ್ಞ ಕಾಲೇಜು(ಪಿಪಿಸಿ) ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಪ್ರವೇಶ ಪತ್ರ ಮತ್ತು ನಿಗದಿತ ಗುರುತಿನ ಚೀಟಿಯೊಂದಿಗೆ ಪರೀಕ್ಷೆಗೆ ಹಾಜರಾಗಬೇಕು. ಪರೀಕ್ಷೆಯ ಪ್ರವೇಶ ಪತ್ರಕ್ಕಾಗಿ ಇಲಾಖೆಯ ಅಧಿಕೃತ ವೆಬ್ಸೈಟ್ www.ksp.gov.in ನ್ನು ಸಂಪರ್ಕಿಸ ಬೇಕು ಎಂದು ಪ್ರಕಟಣೆ ತಿಳಿಸಿದೆ.
Next Story