ಮಲ್ಲಾರು: ಬದ್ರಿಯಾ ಜುಮಾ ಮಸೀದಿಯಲ್ಲಿ ಮೀಲಾದುನ್ನಬಿ ಕಾರ್ಯಕ್ರಮ
ಮಂಗಳೂರು, ನ. 22: ಬದ್ರಿಯಾ ಜುಮಾ ಮಸೀದಿ ಮಜೂರು, ಮಲ್ಲಾರುನಲ್ಲಿ 3 ದಿವಸಗಳ ಮೀಲಾದುನ್ನಬಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸ್ವಲಾತ್ ಮಜ್ಲಿಸ್, ಸಾಂಸ್ಕೃತಿಕ ಕಾರ್ಯಕ್ರಮ, ದಫ್ ಪ್ರದರ್ಶನ, ಮದ್ಹುರ್ರಸೂಲ್, ವಿದ್ಯಾರ್ಥಿ ಪುರಸ್ಕಾರ, ಮೀಲಾದ್ ಜಾಥಾ, ಮೌಲೀದ್ ಪಾರಾಯಣ ನಡೆಯಿತು. ಜಮಾಅತ್ ಖತೀಬ್ ಅಬ್ದುರ್ರಶೀದ್ ಸಖಾಫಿ ದುಆ ನೆರವೇರಿಸಿದರು. ಬಿಜೆಎಂ ಅಧ್ಯಕ್ಷ ಎಮ್.ಎಚ್ ಅಬ್ದುಲ್ ಹಮೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದ್ ಮುಸ್ತಫ ಸಖಾಫಿ ಉದ್ಘಾಟಿಸಿದರು.
ಈ ಸಂದರ್ಭ ಬಿಜೆಎಂ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಫಾರೂಕ್ ಚಂದ್ರನಗರ, ಕೆ.ಪಿ. ಸಾದಿಕ್, ಅಬೂಬಕರ್ ಸಿದ್ದೀಕ್ ಸಅದಿ, ಮುಹಮ್ಮದ್ ಅಶ್ರಫ್ ಮದನಿ, ಸಿರಾಜುಲ್ ಹುದಾ ಮುಹಮ್ಮದ್ ಅಶ್ರಫ್, ಅಬ್ದುಲ್ ಬಶೀರ್ ಹನೀಫ್, ಉಸ್ಮಾನ್ ಮದನಿ, ಶರ್ಫುದ್ದೀನ್ ಸ್ವಲಾತ್ ಸಮಿತಿ, ಮಸ್ ಲೂದ್ ಹಿಮಾಮಿ, ಶಂಶುದ್ದೀನ್ ಕರಂದಾದಿ, ಎಂ.ಕೆ. ಇಬ್ರಾಹಿಂ ಉಪಸ್ಥಿತರಿದ್ದರು.
Next Story