ಡಿ.9ರಂದು ಕಲ್ಲಡ್ಕದಲ್ಲಿ ರಕ್ತದಾನ ಶಿಬಿರ
ವಿಟ್ಲ, ಡಿ.8: ಟಿಪ್ಪು ಸುಲ್ತಾನ್ ಯಂಗ್ ಮೆನ್ಸ್ ಕಲ್ಲಡ್ಕ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಡಿ.9ರಂದು ಬೆಳಗ್ಗೆ 9ರಿಂದ ಕಲ್ಲಡ್ಕದ ಸರಕಾರಿ ಮಾದರಿ ಶಾಲಾ ವಠಾರದಲ್ಲಿ ನಡೆಯಲಿದೆ.
ಎಸ್ ಡಿಪಿಐ ಮಾಜಿ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್ ಅಧ್ಯಕ್ಷತೆ ವಹಿಸುವರು.
ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ಪಿಎಫ್ಐ ಕಲ್ಲಡ್ಕ ಡಿವಿಜನ್ ಅಧ್ಯಕ್ಷ ಝಕರಿಯ ಗೋಳ್ತಮಜಲು, 50 ಬಾರಿ ರಕ್ತದಾನ ಮಾಡಿದ ರಕ್ತದಾನಿ ಅಬ್ದುಲ್ ಹಕೀಂ ಕಲ್ಲಡ್ಕ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಿ.ಕೆ.ಇದಿನಬ್ಬ ಕಲ್ಲಡ್ಕ, ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯ ಯೂಸುಫ್ ಹೈದರ್, ಕಲ್ಲಡ್ಕ ಪ್ರೀಮಿಯರ್ ಲೀಗ್(ಕೆಪಿಎಲ್)ನ ರೂವಾರಿ ನಝೀರ್ ಬಳ್ಳೆಕೋಡಿ, ಬ್ಲಡ್ ಹೆಲ್ಪ್ ಲೈನ್ ನಿರ್ವಾಹಕರಾದ ಅಜಯ್, ಸಲೀಂ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಟಿಪ್ಪು ಸುಲ್ತಾನ್ ಯಂಗ್ ಮೆನ್ಸ್ ಅದ್ಯಕ್ಷ ಅಶ್ರಫ್ ಅರಬಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.