ಬೈಂದೂರು: ಬಿಸಿ ನೀರು ಬಿದ್ದು ಯುವತಿ ಮೃತ್ಯು
ಬೈಂದೂರು, ಡಿ.8: ಬಿಸಿ ನೀರು ಮೈಗೆ ಹಾಕಿಕೊಂಡ ಪರಿಣಾಮ ಗಂಭೀರ ವಾಗಿ ಗಾಯಗೊಂಡ ಯುವತಿಯೊಬ್ಬಳು ಮೃತಪಟ್ಟ ಘಟನೆ ಉಪ್ಪುಂದ ಗ್ರಾಮದ ಫಿಶರಿಶ್ ಕಾಲೋನಿಯಲ್ಲಿ ನಡೆದಿದೆ.
ಮೃತರನ್ನು ಪಿಶರಿಶ್ ಕಾಲೋನಿಯ ನಾಗರತ್ನ(26) ಎಂದು ಗುರುತಿಸಲಾಗಿದೆ.
ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಇವರು ಡಿ.1ರಂದು ಮನೆಯಲ್ಲಿ ಬಿಸಿ ನೀರನ್ನು ಮೈಗೆ ಹಾಕಿಕೊಂಡಿದ್ದು, ಇದರಿಂದ ಗಂಭೀರವಾಗಿ ಸುಟ್ಟ ಗಾಯಗೊಂಡ ಇವರು ಡಿ.7ರಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story