ನವಮಂಗಳೂರು ಬಂದರಿಗೆ ಎರಡು ವಿದೇಶಿ ಹಡಗುಗಳು ಆಗಮನ
ಮಂಗಳೂರು, ಡಿ.12: ನವಮಂಗಳೂರು ಬಂದರಿಗೆ ವಿದೇಶಿ ಪ್ರಯಾಣಿಕರನ್ನೊಳಗೊಂಡ ಬೃಹತ್ ಹಡಗುಗಳು ಡಿಸೆಂಬರ್ 11ಮತ್ತು 12ರಂದು ಆಗಮಿಸಿದೆ. ಇಟೆಲಿಯ ಕೋಸ್ಟ್ ನಿಯೋರಿವಿಯಿರ ಹಡಗು ಮುಂಬೈ ಮೂಲಕ ಮತ್ತು ಮಾಲ್ಟಾ ದೀಪದ ಮಾರೆಲ್ಲಾ ಡಿಸ್ಕವರಿ ಹಡಗು ಮರ್ಮಗೋವಾದ ಮೂಲಕ ನವಮಂಗಳೂರು ಬಂದರಿಗೆ ಆಗಮಿಸಿವೆ. ಇಟೆಲಿಯ ಕೋಸ್ಟ್ ನಿಯೋರಿವಿಯಿರ ಹಡಗಿನಲ್ಲಿ 1727 ಪ್ರಯಾಣಿಕರು ಹಾಗೂ 500 ಸಿಬ್ಬಂದಿಗಳಿದ್ದಾರೆ.
ಮಾಲ್ಟಾದಿಂದ ಆಗಮಿಸಿದ ಮಾರೆಲ್ಲಾ ಡಿಸ್ಕವರಿ ಹಡಗಿನಲ್ಲಿ 1839 ಪ್ರಯಾಣಿಕರು ಹಾಗೂ 750 ಸಿಬ್ಬಂದಿಗಳು ಆಗಮಿಸಿದ್ದಾರೆ. ನವಮಂಗಳೂರು ಬಂದರಿಗೆ ಈ ವರ್ಷ ಇದುವರೆಗೆ 32 ನೌಕೆಗಳು ಆಗಮಿಸಿದೆ. ಕಳೆದ ಬಾರಿ 22 ಹಡಗುಗಳು ಆಗಮಿಸಿದ್ದು 24,258 ಪ್ರಯಾಣಿಕರು ಭೇಟಿ ನೀಡಿದ್ದರು ಎಂದು ಎನ್ಎಂಪಿಟಿ ಪ್ರಕಟಣೆ ತಿಳಿಸಿದೆ.
Next Story