ಉಡುಪಿ: ಡಿ.14ರಂದು ಎಸ್ಪಿ ಪೋನ್ ಇನ್ ಕಾರ್ಯಕ್ರಮ
ಉಡುಪಿ, ಡಿ.13: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬಿ. ನಿಂಬರ್ಗಿ ಅವರ ನೇರ ಫೋನ್ ಇನ್ ಕಾರ್ಯಕ್ರಮವು ಡಿ.14ರಂದು ಬೆಳಗ್ಗೆ 10ರಿಂದ 11ಗಂಟೆಯವರೆಗೆ ನಡೆಯಲಿದೆ.
ಸಾರ್ವಜನಿಕರು ಸ್ಥಿರ ದೂರವಾಣಿ ಸಂಖ್ಯೆ: 0820-2534777ಕ್ಕೆ ಕರೆ ಮಾಡಿ ತಮ್ಮ ಅಹವಾಲುಗಳನ್ನು ತಿಳಿಸಬಹುದು ಅಥವಾ ಪೊಲೀಸ್ ಇಲಾಖಾ ಕರ್ತವ್ಯಕ್ಕೆ ಸಂಬಂಧಪಟ್ಟ ಸಲಹೆಗಳು ಅಥವಾ ವಾಸಿಸುವ ಪ್ರದೇಶ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಕುರಿತ ಮಾಹಿತಿಗಳನ್ನು ನೀಡಬಹುದು. ಕರೆ ಮಾಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Next Story