ಒಬಿಸಿ, ಅಲಹಾಬಾದ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಬಾಲಕೃಷ್ಣ ಅಲ್ಸೆ, ರಾಮಚಂದ್ರನ್ ನೇಮಕ
ಬಾಲಕೃಷ್ಣ ಅಲ್ಸೆ - ರಾಮಚಂದ್ರನ್
ಮಂಗಳೂರು, ಡಿ. 27: ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಅಲಹಾಬಾದ್ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಪೊರೇಶನ್ನ ಪ್ರಧಾನ ವ್ಯವಸ್ಥಾಪಕರಾಗಿರುವ ಎಸ್.ಬಾಲಕೃಷ್ಣ ಅಲ್ಸೆ ಮತ್ತು ಕೆ. ರಾಮಚಂದ್ರನ್ ಅವರನ್ನು ಆಯ್ಕೆ ಮಾಡಲಾಗಿದೆ.
ಕೃಷಿ ವಿಜ್ಞಾನದಲ್ಲಿ ಪದವಿ ಪಡೆದಿರುವ ಬಾಲಕೃಷ್ಣ ಅಲ್ಸೆ ಭಾರತೀಯ ಬ್ಯಾಂಕರ್ಸ್ ಸಂಸ್ಥೆಯ ಪ್ರಮಾಣಿತ ಅಸೋಸಿಯೇಟ್ ಆಗಿದ್ದಾರೆ. 1983ರಲ್ಲಿ ಕೃಷಿ ಫೀಲ್ಡ್ ಅಧಿಕಾರಿಯಾಗಿ ಕಾರ್ಪೊರೇಶನ್ ಬ್ಯಾಂಕ್ ಸೇರಿದ ಅವರು 2003ರಲ್ಲಿ ಬ್ಯಾಂಕ್ನ ಕಾರ್ಯನಿರ್ವಾಹಕ ದರ್ಜೆಗೆ ಏರಿದರು.
ವಿಜ್ಞಾನ ವಿಷಯದಲ್ಲಿ ಸ್ನಾತಕೋತರ ಪದವಿ ಪಡೆದಿರುವ ಕೆ. ರಾಮಚಂದ್ರನ್ ಮೂವತ್ತು ವರ್ಷಗಳ ಬ್ಯಾಂಕಿಂಗ್ ಅನುಭವವನ್ನು ಹೊಂದಿದ್ದಾರೆ. 1988ರಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಅವರು 2005ರಲ್ಲಿ ಕಾರ್ಯನಿರ್ವಾಹಕ ದರ್ಜೆಗೆ ಏರಿದರು.
Next Story