ಡಾ. ಮಧುಕರ್ ಶೆಟ್ಟಿ ಪಾರ್ಥಿವ ಶರೀರದ ಅಂತ್ಯಕ್ರಿಯೆಗೆ ಸಿದ್ದತೆ
ಕುಂದಾಪುರ, ಡಿ.30: ಶುಕ್ರವಾರ ನಿಧನರಾದ ಹಿರಿಯ ಐಪಿಎಸ್ ಅಧಿಕಾರಿ ಡಾ.ಕೆ. ಮಧುಕರ್ ಶೆಟ್ಟಿ ಪಾರ್ಥಿವ ಶರೀರದ ಅಂತ್ಯಕ್ರಿಯೆಗೆ ಅವರ ಊರು ಯಡಾಡಿಯಲ್ಲಿ ಸಕಲ ಸಿದ್ದತೆಗಳು ಪೂರ್ಣಗೊಂಡಿದೆ.
ಯಡಾಡಿಯ ಫಾರ್ಮ್ ಹೌಸ್ ನಲ್ಲಿ ತಂದೆ ವಡ್ಡರ್ಸೆ ರಘುರಾಮ ಶೆಟ್ಟಿ ಮತ್ತು ತಾಯಿ ಪ್ರಪುಲ್ಲ ಶೆಟ್ಟಿ ಸಮಾಧಿಯ ಪಕ್ಕದಲ್ಲೇ ಡಾ.ಮಧುಕರ ಶೆಟ್ಟಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ.
ಇಂದು ಬೆಳಗ್ಗಿನಿಂದ ಬಂಧುಗಳು, ಸ್ನೇಹಿತರು, ಅಧಿಕಾರಿಗಳು, ಅಭಿಮಾನಿಗಳು ಸೇರಿದಂತೆ ಸಹಸ್ರಾರು ಮಂದಿ ಮಧುಕರ್ ಶೆಟ್ಟಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
Next Story