ರಾಜ್ಕಮಲ್ ಮುಹಮ್ಮದ್ ಹಾಜಿ ನಿಧನ
ವಿಟ್ಲ, ಜ.7: ಮಾಣಿ ಸಮೀಪದ ಬೂಡೋಳಿ ನಿವಾಸಿ ರಾಜ್ಕಮಲ್ ಮುಹಮ್ಮದ್ ಹಾಜಿ (80) ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾದರು.
ಪಿಡಬ್ಲುಡಿ ಗುತ್ತಿಗೆದಾರರಾಗಿದ್ದ ಅವರು ಕಬಕ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷರು, ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಗೌರವಾಧ್ಯಕ್ಷ, ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಕೊಡುಗೈದಾನಿಯಾಗಿದ್ದ ಮುಹಮ್ಮದ್ ಹಾಜಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಬಡ ಹೆಣ್ಮಕ್ಕಳ ಮದುವೆ ಹಾಗೂ ಇನ್ನಿತರ ಸಮಾಜಿಕ ಕಾರ್ಯಕ್ರಮಗಳಿಗೆ ಸಹಾಯ ಮಾಡುತ್ತಿದ್ದರು.
ಇತ್ತೀಚೆಗೆ 1 ಕೋಟಿ ರೂ. ವೆಚ್ಚದಲ್ಲಿ ಕಬಕದ ಮಸೀದಿಯ ಪುನರ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ನಿನ್ನೆಯಷ್ಟೆ ಮಸೀದಿಯ ಮೇಲ್ಛಾವಣೆಯ ಹಂಚುಗಳನ್ನು ತೆಗೆಯಲಾಗಿತ್ತು.
Next Story