ಮಲ್ಪೆ ಪ.ಪೂ.ಕಾಲೇಜಿನಲ್ಲಿ ಕಳವು
ಮಲ್ಪೆ, ಜ.10: ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಬುಧವಾರ ರಾತ್ರಿ ವೇಳೆ ನುಗ್ಗಿದ ಕಳ್ಳರು ಕಂಪ್ಯೂಟರ್ ಸೇರಿದಂತೆ ಸುಮಾರು 84,000ರೂ. ಮೌಲ್ಯದ ವಿವಿಧ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲೇಜಿನ ಕಚೇರಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಕಚೇರಿಯ ಬೀಗ ಮುರಿದ ಕಳ್ಳರು ಇಲಾಖೆಯಿಂದ ಸರಬರಾಜಾದ ಕಂಪ್ಯೂಟರ್ ಸೇರಿದಂತೆ ಒಟ್ಟು ಮೂರು ಕಂಪ್ಯೂಟರ್ಗಳು, ಬೆಲೆಬಾಳುವ ಆಟೋಟ ಸಾಮಗ್ರಿಗಳು ಸೇರಿದಂತೆ 84,000 ರೂ.ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದಾಗಿ ಕಾಲೇಜಿನ ಪ್ರಾಂಶುಪಾಲರು ಮಲ್ಪೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story