ಮನೆಗೆ ನುಗ್ಗಿ ಲಕ್ಷಾಂತರ ಸೊತ್ತು ಕಳವು
ಉಡುಪಿ, ಜ.12: 76 ಬಡಗುಬೆಟ್ಟು ಬೈಲೂರು ಸಮೀಪದ ಭೀಮಾ ನಗರ ಎಂಬಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತು ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಭೀಮಾ ನಗರದ ಶಹಜಾನ್ ಖಾಝಿ ಎಂಬವರು ತನ್ನ ಪತ್ನಿಯೊಂದಿಗೆ ದುಬೈಯಲ್ಲಿರುವ ತಮ್ಮ ಮಗಳ ಮನೆಗೆ ಡಿ.12ರಂದು ಹೋಗಿದ್ದು, ಜ.11ರಂದು ರಾತ್ರಿ 8:30ರ ಸುಮಾರಿಗೆ ಮನೆಗೆ ವಾಪಾಸ್ಸು ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂತೆನ್ನಲಾಗಿದೆ.
ಮನೆಯ ಮಖ್ಯದ್ವಾರ ಹಾಗೂ ಹಿಂಬದಿ ಬಾಗಿಲುಗಳನ್ನು ಮುರಿದು ಒಳ ನುಗ್ಗಿದ ಕಳ್ಳರು, ಕೋಣೆಗಳ ಕಪಾಟಿನಲ್ಲಿದ್ದ 95 ಗ್ರಾಂ ತೂಕದ ಚಿನ್ನಾಭರಣ, 110 ಗ್ರಾಂ ತೂಕದ ಬೆಳ್ಳಿಯ ಆಭರಣ, 1,65,000 ರೂ. ನಗದು, 25,000 ರೂ. ಮೌಲ್ಯದ ಮೂರು ಪುರುಷರ ವಾಚ್ ಮತ್ತು 5,000ರೂ. ಮೌಲ್ಯದ ಒಂದು ಮಹಿಳೆಯರ ವಾಚ್ಗಳು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 3,75,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story