ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಬೈಂದೂರು, ಜ.15: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಯಡ್ತರೆ ಗ್ರಾಮದ ಯೋಜನ ನಗರ ನಿವಾಸಿ ಜಾನ್ ರೋಡಿಗ್ರಸ್ ಎಂಬವರ ಪತ್ನಿ ಮರಿಯಾ ರೋಡ್ರಿಗಸ್(50) ಎಂಬವರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಜ.10ರಂದು ರಾತ್ರಿ ಊಟ ಮಾಡಿ ಮಲಗಿವರು ಬೆಳಗ್ಗೆ ನಾಪತ್ತೆಯಾಗಿ ದ್ದರು. ಹುಡುಕಾಟ ನಡೆಸಿದಾಗ ಇವರ ಮೃತದೇಹವು ಜ.14ರಂದು ಯಡ್ತರೆ ಗ್ರಾಮದ ವಿದ್ಯಾನಗರದ ದರ್ಖಾಸ್ಕಾಲೋನಿ ಎಂಬಲ್ಲಿರುವ ಬಾವಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
Next Story