ಖೇಲೋ ಭಾರತ್ ರಾಷ್ಟ್ರಮಟ್ಟದ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ : ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಧನೆ
ಮೂಡುಬಿದಿರೆ, ಜ. 15: ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಭಾರತ್ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ.
ಹೈಜಂಪ್ನಲ್ಲಿ ಆಳ್ವಾಸ್ನ ಅಭಿನಯ ಶೆಟ್ಟಿ ಚಿನ್ನದ ಪದಕ ಪಡೆದಿದ್ದು, ಆಳ್ವಾಸ್ ಮತ್ತೋರ್ವ ಕ್ರೀಡಾಪಟು ಸುಪ್ರೀಯಾ ಶೆಟ್ಟಿ ಬೆಳ್ಳಿ ಪದಕ ಪಡೆದಿದ್ದಾರೆ. ವೇಟ್ ಲಿಫ್ಟಿಂಗ್ನ 67 ವಿಭಾಗದಲ್ಲಿ ಆಳ್ವಾಸ್ನ ಭವಿಷ್ಯ ಪೂಜಾರಿ ಬೆಳ್ಳಿ ಪದಕ ಪಡದಿದ್ದು, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಲಾವಣ್ಯ ರೈ ಭಾನುವಾರ 71 ಕೆ.ಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಆಳ್ವಾಸ್ನ ನಿಶಾಂತ್ ವೇಟ್ಲಿಫ್ಟಿಂಗ್ 109 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ, ಆಳ್ವಾಸ್ನ ವಿದ್ಯಾರ್ಥಿನಿ ಲಕ್ಷ್ಮೀ ರಡೆಕರ್ ಕಂಚಿನ ಪದಕ ಪಡೆಯುವುದರ ಮೂಲಕ 8ನೇ ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದಿದ್ದಾರೆ.
Next Story