ಮನೆಗಳ್ಳತನ: ಇಬ್ಬರು ನೇಪಾಳಿಗರು ವಶಕ್ಕೆ
ಉಡುಪಿ, ಜ.17: ಉಡುಪಿ ಹಾಗೂ ಮಣಿಪಾಲ ಪರಿಸರದಲ್ಲಿ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ನೇಪಾಳಿಗರನ್ನು ಉಡುಪಿ ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ವರದಿಯಾಗಿದೆ.
ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ದಾವಣಗೆರೆಯಲ್ಲಿ ವಶಪಡಿಸಿಕೊಂಡು ಉಡುಪಿಗೆ ಕರೆ ತಂದಿದ್ದಾರೆ. ಇವರನ್ನು ಉಡುಪಿಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇವರ ಹಿಂದೆ ಬಹಳ ದೊಡ್ಡ ಜಾಲ ಇದ್ದು, ಅದರ ಮೂಲ ನೇಪಾಳ ಆಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಪೊಲೀಸ್ ತಂಡ ನೇಪಾಳಕ್ಕೆ ತೆರಳಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.
Next Story