ಬಾಲಕಿಯ ಅತ್ಯಾಚಾರ ಪ್ರಕರಣ: ಜಾಲತಾಣದಲ್ಲಿ ಸಂತ್ರಸ್ತೆಯ ಭಾವಚಿತ್ರ ಹರಿಬಿಟ್ಟಿದ್ದ ಆರೋಪಿಗಳ ಬಂಧನ
ಮಂಗಳೂರು, ಜ.18: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತೆಯ ಭಾವಚಿತ್ರ ಹಾಗೂ ಆಕೆಯ ವಿರುದ್ಧವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಸಂದೇಶ ಹರಿಬಿಟ್ಟಿದ್ದ ಆರೋಪಿಗಳನ್ನು ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.
ಸೋಮೆಶ್ವರ ನಿವಾಸಿ ನಿವೇಶ್ ಪೂಜಾರಿ (28), ನಗರದ ಕೆಪಿಟಿ ಸಮೀಪದ ದುರ್ಗೇಶ್ (25) ಬಂಧಿತ ಆರೋಪಿಗಳು.
ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕಲಂ 67(ಬಿ)(ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಬಗ್ಗೆ ಅಶ್ಲೀಲವಾಗಿ ನಡೆದುಕೊಳ್ಳುವುದು), 228(ಎ)(ಸಂತ್ರಸ್ತೆಯ ಗುರುತು ಬಹಿರಂಗ), 14 (ಪೋಕ್ಸೋ ಕಾಯ್ದೆ)ರಂತೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ವಶಕ್ಕೆ ಪಡೆದು, ತನಿಖೆ ಕೈಗೊಳ್ಳಲಾಗಿದೆ.
Next Story