ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ: ಚಿನ್ನದ ಪದಕ ಪಡೆದ ಒಕ್ಕೆತ್ತೂರು ಶಾಲೆಯ ಸುಜಿತ್
ಸುಜಿತ್
ಬಂಟ್ವಾಳ, ಜ. 18: ದ.ಕ.ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲೆ ಒಕ್ಕೆತ್ತೂರು ಇಲ್ಲಿಯ 4 ನೇ ತರಗತಿ ವಿದ್ಯಾರ್ಥಿ ಸುಜಿತ್ ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆರ್ಟ್ಸ್ ಶಿಟೊ-ರಿಯೋ ಕರಾಟೆ-ಡು ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯ ಬಾಲಕರ ವೈಯಕ್ತಿಕ ಕಟಾ ಮತ್ತು ಕುಮಿಟೆ ವಿಭಾಗಳಲ್ಲಿ ಚಿನ್ನದ ಪದಕ ಹಾಗೂ ಗ್ರೂಪ್ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.
ಸುಜಿತ್ ಸುರುಳಿಮೂಲೆ ಪಾದೆಮಜಲು ಸುಂದರ ಮತ್ತು ಲಲಿತ ಪುತ್ರ. ಕರಾಟೆ ಶಿಕ್ಷಕ ಮಾಧವ ಅಳಿಕೆ ಇವರ ಶಿಷ್ಯ
Next Story