ಬಂಟ್ವಾಳ ತಹಶೀಲ್ದಾರ್ ಆಗಿ ರಶ್ಮಿ ಎಸ್.ಆರ್. ಅಧಿಕಾರ ಸ್ವೀಕರ
ಬಂಟ್ವಾಳ, ಜ. 19: ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆನೂತನ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರು ಶನಿವಾರ ಅಧಿಕಾರ ಸ್ವೀಕರಿಸಿದರು.
ಶನಿವಾರ ಬೆಳಗ್ಗೆ ಮಿನಿ ವಿಧಾನ ಸೌಧದಲ್ಲಿ ಕರ್ತವ್ಯಕ್ಕೆ ಹಾಜರಾದ ರಶ್ಮಿ ಅವರಿಗೆ ತಾಲೂಕು ಕಚೇರಿ ಸಿಬ್ಬಂದಿ ವರ್ಗ ಸ್ವಾಗತಿಸಿದರು. ಈ ಸಂದರ್ಭ ಉಪತಹಶೀಲ್ದಾರ್ ಗಳಾದ ವಾಸು ಶೆಟ್ಟಿ, ರಾಜೇಶ್ ನಾಯ್ಕ್, ಪ್ರಭಾರ ಉಪತಹಶೀಲ್ದಾರ್ ಗ್ರೆಟ್ಟಾ ಮಸ್ಕರೇಂಜಸ್, ಸೀತಾರಾಮ ನೂತನ ತಹಶೀಲ್ದಾರರಿಗೆ ಶುಭಾಶಯ ಕೋರಿದರು. ನಿರ್ಗಮನ ತಹಶೀಲ್ದಾರ್ ಪುರಂದರ ಹೆಗ್ಡೆ ಉಪಸ್ಥಿತರಿದ್ದರು.
Next Story