ಅಮೆಮಾರ್: ಜ. 28 ರಿಂದ ರಿಫಾಯಿ ರಾತೀಬ್, ಮಜ್ಲಿಸುನ್ನೂರು ಕಾರ್ಯಕ್ರಮ
ಫರಂಗಿಪೇಟೆ, ಜ. 26: ಪುದು ಗ್ರಾಮದ ಅಮೆಮಾರ್ ನಲ್ಲಿ ಸುಲ್ತಾನುಲ್ ಆರಿಫೀನ್ ಅಸ್ಸೆಯ್ಯದ್ ಅಹ್ಮದುಲ್ ಕಬೀರ್ ರಿಫಾಯಿ (ಖಸಿ) ರವರ 12 ನೇ ವಾರ್ಷಿಕೋತ್ಸವ ರಾತೀಬ್ ಜ. 28 ರಿಂದ ಫೆ. 3 ರವರೆಗೆ ಅಮೆಮಾರ್ ನಲ್ಲಿ ನಡೆಯಲಿದೆ.
ಅಲ್ ಹಾಜ್ ಶೈಖುನಾ ಅಸ್ಸೈಯ್ಯದ್ ಹಾಶಿಮ್ ಇಪಿ ಆಟಕೋಯ ತಂಙಳ್ ಖಾದಿರಿಯ್ಯ, ನೀಲಾಮಿಯ್ಯ, ರಿಫಾಯಿಯ್ಯ ಲಕ್ಷದ್ವೀಪ-ಕವರತ್ತಿ ಇವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮವೂ ಜ. 28 ರಂದು ದ್ವಜಾರೋಹಣ ಮತ್ತು ವಿಧ್ಯಾರ್ಥಿಗಳ ಪಥ ಸಂಚಲನದಲ್ಲಿ ಪ್ರಾರಂಭಗೊಂಡು ಸಭಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪಂಡಿತ ಶಿರೋಮಣಿಗಳು, ಧಾರ್ಮಿಕ, ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ರಿಫಾಯಿ ದಫ್ ಕಮಿಟಿ ಅಧ್ಯಕ್ಷ ಅಕ್ತಾರ್ ಹುಸೈನ್ ತಿಳಿಸಿದ್ದಾರೆ.
Next Story