ತಾಯಿ ಮಗಳು ನಾಪತ್ತೆ
ಕೋಟ, ಫೆ.2: ತಾಯಿ ಮಗಳು ನಾಪತ್ತೆಯಾಗಿರುವ ಘಟನೆ ಮೂಡು ಗಿಳಿಯಾರು ಹೊನ್ನಾರಿ ಎಂಬಲ್ಲಿ ಜ.31ರಂದು ನಡೆದಿದೆ.
ಹೊನ್ನಾರಿಯ ಸುರೇಂದ್ರ ನಾಯಕ್ ಎಂಬವರ ಮಗಳು ಸಂಗೀತ(24) ಎಂಬವರು ಬಸ್ರೂರಿನ ಪಂಜುರ್ಲಿ ದೇವಸ್ಥಾನದ ಗೆಂಡಸೇವೆಗೆ ಹೋಗಿ ಬರುವುದಾಗಿ ಹೇಳಿ ಮಗಳು ಸಮೃದ್ಧಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋದವರು ಈವರೆಗೆ ವಾಪಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story