ಕೋಟ: ಮನೆ ಸ್ಲಾಬ್ನಿಂದ ಬಿದ್ದು ಮೃತ್ಯು
ಕೋಟ, ಫೆ.5: ಮೊಳಹಳ್ಳಿ ಗ್ರಾಮದ ಹುಲಿಕಲ್ಕೆರೆ ಎಂಬಲ್ಲಿ ಮನೆಯ ಸ್ಲಾಬ್ ಮೇಲೆ ನಿಂತು ಮರದಿಂದ ನುಗ್ಗೆ ಕಾಯಿ ಕೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಹುಲಿಕಲ್ಕೆರೆಯ ಸದಾಶಿವಯ್ಯ (55) ಎಂದು ಗುರುತಿಸ ಲಾಗಿದೆ.
ಫೆ.2ರಂದು ಬೆಳಗ್ಗೆ ಮನೆಯ ಸ್ಲಾಬ್ ಮೇಲೆ ನಿಂತು ಪಕ್ಕದ ನುಗ್ಗೆ ಮರದಿಂದ ನುಗ್ಗೆ ಕೋಡನ್ನು ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡ ಇವರು ಫೆ.4ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿ ದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story