ಕಾರವಾರ: ಲಾರಿ - ಕಾರು ಢಿಕ್ಕಿ; ಓರ್ವ ಮಹಿಳೆ ಮೃತ್ಯು, ಮೂವರಿಗೆ ಗಾಯ
ಕಾರವಾರ, ಫೆ. 9: ಲಾರಿ ಮತ್ತು ಕಾರು ಮುಖಾಮುಖಿ ಢಿಕ್ಕಿಯಾಗಿ ಉಂಟಾದ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಕಾರವಾರ ತಾಲೂಕಿನ ಮುದಗಾ ಬಳಿ ಇಂದು ಬೆಳಗ್ಗೆ ನಡೆದಿದೆ.
ಶಾಫಿಯಾ ಮಹಮ್ಮದ್ ಸಯ್ಯದ್ (65) ಮೃತರು ಎಂದು ಗುರುತಿಸಲಾಗಿದೆ. ಓಮ್ನಿ ಚಾಲಕ ಝುಬೈರ್, ಮೀನಾಕ್ ಬೋಪೆರ್, ಎರಡು ವರ್ಷದ ಮಗು ಗಾಯಗೊಂಡವರು.
ಈ ಬಗ್ಗೆ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story