ಸೋಶಿಯಲ್ ಅಚಿವ್ಮೆಂಟ್ ಫಾರಂ ಮಂಗಳೂರು: ಅಧ್ಯಕ್ಷರಾಗಿ ನಾಸಿರ್ ಅಹ್ಮದ್ ಸಾಮಣಿಗೆ
ನಾಸಿರ್ ಅಹ್ಮದ್
ಮಂಗಳೂರು, ಫೆ. 11: ಸೋಶಿಯಲ್ ಅಚಿವ್ಮೆಂಟ್ ಫಾರಂ ಮಂಗಳೂರು ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ದೇರಳಕಟ್ಟೆಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ನಾಸಿರ್ ಅಹ್ಮದ್ ಸಾಮಣಿಗೆ ಅಯ್ಕೆಯಾದರು.
ಉಪಾಧ್ಯಕ್ಷರಾಗಿ ಇಬ್ರಾಹಿಂ ಖಲೀಲ್ ಮತ್ತು ಅಬ್ದುಲ್ ಖಾದರ್ ಅಡ್ಕರೆ, ಪ್ರಧಾನ ಕಾರ್ಯದರ್ಶಿಯಾಗಿ ನವಾಝ್ ಎಮ್.ಬಿ. ಸಂಚಾಲಕರಾಗಿ ನಿಯಾಝ್ ಸಾಮಣಿಗೆ ಮತ್ತು ಹನೀಫ್ ಕುತ್ತಾರ್, ಕೊಶಾಧಿಕಾರಿಯಾಗಿ ಮೊಯ್ದಿನ್ ಮಂಜನಾಡಿ, ಸಲಹೆಗಾರರಾಗಿ ಬಶೀರ್ ಕಲ್ಕಟ್ಟ, ಸಂಘಟನಾ ಕಾರ್ಯದರ್ಶಿಯಾಗಿ ಅಮೀರ್ ಶಾಫಿ, ಕಾರ್ಯದರ್ಶಿಯಾಗಿ ನಿಯಾಝ್ ಪಡೀಲ್, ಜೊತೆ ಕಾರ್ಯದರ್ಶಿಯಾಗಿ ಯೂಸುಫ್ ಅಸೈ, ಕಾನೂನು ಸಲಹೆಗಾರರಾಗಿ ಅಡ್ವಕೇಟ್ ಫೈಝಲ್ ಹಾಗೂ 15 ಜನ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾದರು.
Next Story