ಅಬುಧಾಬಿಯಲ್ಲಿ ನಡೆಯುವ ವರ್ಲ್ಡ್ ಸ್ಪೆಶಲ್ ಒಲಿಂಪಿಕ್ಸ್ಗೆ ಮರ್ದಾಳದ ದಿವ್ಯಾ ಆಯ್ಕೆ
ಕಡಬ, ಫೆ.11: ಅಬುಧಾಬಿಯಲ್ಲಿ ಮಾರ್ಚ್ 14ರಿಂದ 21ರವರೆಗೆ ನಡೆಯಲಿರುವ ವರ್ಲ್ಡ್ ಸ್ಪೆಶಲ್ ಒಲಿಂಪಿಕ್ಸ್ಗೆ ಮರ್ಧಾಳದ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲಾ ವಿದ್ಯಾರ್ಥಿನಿ ದಿವ್ಯಾ ಬೆತ್ತೋಡಿ ಆಯ್ಕೆಯಾಗಿದ್ದಾರೆ.
190 ದೇಶಗಳ 7,500 ಕ್ರೀಡಾಳುಗಳು, 24 ಕ್ರೀಡಾ ಸ್ಪರ್ಧೆಗಳನ್ನೊಳಗೊಂಡ ವರ್ಲ್ಡ್ ಸ್ಪೆಶಲ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವ ಭಾರತೀಯ ಮಹಿಳಾ ವಾಲಿಬಾಲ್ ತಂಡಕ್ಕೆ ಕರ್ನಾಟಕದಿಂದ ಏಕೈಕ ಆಟಗಾರ್ತಿಯಾಗಿ ದಿವ್ಯಾ ಆಯ್ಕೆಯಾಗಿದ್ದಾರೆ.
Next Story