ಪ್ರೇಮಿಗಳ ದಿನಾಚರಣೆಗೆ ವಿರೋಧ: ಮಂಗಳೂರಿನಲ್ಲಿ ಹೂವಿನ ಅಂಗಡಿಗೆ ದಾಳಿ
ಮಂಗಳೂರು, ಫೆ. 14: ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತಪಡಿಸಿ ಮಂಗಳೂರಿನಲ್ಲಿ ಹೂವಿನ ಅಂಗಡಿಗೆ ದಾಳಿ ಮಾಡಿದ ಘಟನೆ ನಡೆದಿದೆ.
ಮಂಗಳೂರಿನ ಕರಂಗಲ್ಪಾಡಿಯಲ್ಲಿರುವ ಹೂವಿನ ಅಂಗಡಿಗೆ ದಾಳಿ ನಡೆಸಿದ ಮೂವರ ತಂಡ ಹೂವಿನ ಅಂಗಡಿಯಲ್ಲಿ ಅಲಂಕಾರ ಮಾಡಿ ಇಡಲಾಗಿದ್ದ ಹೂವುಗಳನ್ನು ಹಾನಿ ಮಾಡಿದ್ದಾರೆ.
ಪ್ರೇಮಿಗಳ ದಿನಾಚರಣೆ ಸಂದರ್ಭ ಅಹಿತಕರ ಘಟನೆ ನಡೆಯಬಾರದು ಎಂದು ಪೊಲೀಸರು ಬಿಗಿಭದ್ರತೆ ನಡೆಸಿದ್ದರೂ ಹೂವಿನ ಅಂಗಡಿಗೆ ದಾಳಿ ಮಾಡುವ ಮೂಲಕ ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತವಾಗಿದೆ. ಬೈಕ್ ನಲ್ಲಿ ಆಗಮಿಸಿದ್ದ ಕಿಡಿಗೇಡಿಗಳು ಗುಲಾಬಿಗಳಿಂದ ಶೃಂಗರಿಸಿದ ಅಂಗಡಿಗೆ ಮತ್ತು ಅಲಂಕರಿಸಿದ್ದ ಸೈಕಲ್ ಗೆ ಹಾನಿ ಮಾಡಿದ್ದಾರೆ ಎಂದು ದೂರಲಾಗಿದೆ.
Next Story