ಅಕ್ರಮ ಗಾಂಜಾ ಮಾರಾಟ: ಓರ್ವನ ಸೆರೆ
ಉಡುಪಿ, ಫೆ.14: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸು ತ್ತಿದ್ದ ಓರ್ವನನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಹೆರ್ಗಾ ಗ್ರಾಮದ ಜೋಯಿಸರ ಕಂಪೌಂಡ್ ರಸ್ತೆಯ ಬಳಿ ಫೆ.13ರಂದು ಮಧ್ಯಾಹ್ನ 2.30ರ ಸುಮಾರಿಗೆ ಬಂಧಿಸಿದ್ದಾರೆ.
ಬಂಧಿತನನ್ನು ಸಾಯಿಕೃಷ್ಣ ಎಂದು ಗುರುತಿಸಲಾಗಿದೆ. ಈತನಿಂದ 40ಸಾವಿರ ರೂ. ವೌಲ್ಯದ 1 ಕಿಲೋ 100 ಗ್ರಾಂ ತೂಕದ ಗಾಂಜಾವನ್ನು ಮತ್ತು ಗಿರಾಕಿ ಕುದುರಿಸಲು ಬಳಸಿದ್ದ 10ಸಾವಿರ ರೂ. ಮೌಲ್ಯದ ಒಂದು ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story