ಫೆ.15: ಮಜೂರು ನವೀಕೃತ ಮಸೀದಿಯ ಉದ್ಘಾಟನೆ
ಕಾಪು, ಫೆ.14: ನವೀಕೃತಗೊಂಡ ಮಜೂರು ಬದ್ರಿಯಾ ಜುಮಾ ಮಸೀದಿಯ ಉದ್ಘಾಟನೆ ಹಾಗೂ ದುವಾವನ್ನು ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ಬಾ ಅಲವಿ ತಂಙಳ್ ಫೆ.15ರಂದು ಮಧ್ಯಾಹ್ನ 12ಗಂಟೆಗೆ ನೆರವೇರಿಸಲಿದ್ದಾರೆ.
ಜುಮುಅ ನೇತೃತ್ವವನ್ನು ಅಲ್ಹಾಜ್ ಯು.ಕೆ.ಮುಹಮ್ಮದ್ ಸಅದಿ ವಹಿಸ ಲಿರುವರು. ಮಗ್ರಿಬ್ ನಮಾಝ್ನ ಬಳಿಕ ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ಅಲ್ ಮದನಿ ತಂಙಳ್ ಮುರ ನೇತೃತ್ವದಲ್ಲಿ ಬದ್ರ್ ವೌಲಿದ್ ಮಜ್ಲಿಸ್ ನಡೆಯಲಿದೆ.
ಈ ಪ್ರಯುಕ್ತ ಫೆ.16ರಂದು ಸ್ನೇಹ ಸೌಹಾರ್ದ ಸಮ್ಮಿಲನ ಹಾಗೂ ಫೆ.17 ರಂದು 4:30ರಿಂದ ಸಿರಾಜುಲ್ ಹುದಾ ದಫ್ ಸಮಿತಿಯಿಂದ ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧೆ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story