ಅಕ್ರಮ ಎಂ-ಸ್ಯಾಂಡ್ ಸಾಗಾಟ: ಎರಡು ಲಾರಿ ವಶ
ಮಂಗಳೂರು, ಫೆ.14: ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪುವಿನಲ್ಲಿ ಪರವಾನಿಗೆ ಇಲ್ಲದೆ ಎಂ-ಸ್ಯಾಂಡ್ ಹಾಗೂ ಮರಳು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರ ಉಪಪೊಲೀಸ್ ಆಯುಕ್ತ ಹನುಮಂತರಾಯ ರೌಂಡ್ಸ್ನಲ್ಲಿದ್ದಾಗ ಮರಳು ಮತ್ತು ಎಂ-ಸ್ಯಾಂಡ್ ಸಾಗಿಸುತ್ತಿದ್ದ ಲಾರಿ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ಧಾರೆ.
ಈ ಲಾರಿಗಳನ್ನು ಮುಂದಿನ ಕ್ರಮಕ್ಕಾಗಿ ಭೂ ಗಣಿ ಮತ್ತು ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ವೌಲ್ಯ 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
Next Story